SAʴý

24 ಗಂಟೆಯಲ್ಲಿ ಗಾಝಾದ 4 ಶಾಲೆಗಳ ಮೇಲೆ ದಾಳಿ; ಯೂನಿಸೆಫ್ ಖಂಡನೆ

"ಎಕ್ಸ್" ಸಾಮಾಜಿಕ ಜಾಲತಾಣದಲ್ಲಿ ಗಾಝಾ ಪಟ್ಟಿಯಲ್ಲಿನ ಶಾಲೆಗಳ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಯೂನಿಸೆಫ್ ಸಂಸ್ಥೆಯು ಆಗ್ರಹಿಸಿದೆ. ಕಳೆದ 24 ಗಂಟೆಯಲ್ಲಿ ಗಾಝಾದ 4 ಶಾಲೆಗಳ ಮೇಲೆ ದಾಳಿ ಇಸ್ರೇಲ್ ಸೇನೆಯು ದಾಳಿ ನಡೆಸಿದೆ ಎಂದು ಹೇಳಿರುವ ಯೂನಿಸೆಫ್ ಸಂಸ್ಥೆಯು ಈ ದಾಳಿಗಳನ್ನು ಅತ್ಯುಗ್ರವಾಗಿ ಖಂಡಿಸಿದೆ.

ವರದಿ: ಫೀಬಿ ಮಾರ್ಟೆಲ್, ಅಜಯ್ ಕುಮಾರ್

"ಎಕ್ಸ್" ಸಾಮಾಜಿಕ ಜಾಲತಾಣದಲ್ಲಿ ಗಾಝಾ ಪಟ್ಟಿಯಲ್ಲಿನ ಶಾಲೆಗಳ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಯೂನಿಸೆಫ್ ಸಂಸ್ಥೆಯು ಆಗ್ರಹಿಸಿದೆ. ಕಳೆದ 24 ಗಂಟೆಯಲ್ಲಿ ಗಾಝಾದ 4 ಶಾಲೆಗಳ ಮೇಲೆ ದಾಳಿ ಇಸ್ರೇಲ್ ಸೇನೆಯು ದಾಳಿ ನಡೆಸಿದೆ ಎಂದು ಹೇಳಿರುವ ಯೂನಿಸೆಫ್ ಸಂಸ್ಥೆಯು ಈ ದಾಳಿಗಳನ್ನು ಅತ್ಯುಗ್ರವಾಗಿ ಖಂಡಿಸಿದೆ.

ಶಾಲೆಗಳನ್ನು ಮಿಲಿಟರಿ ಗುರಿಗಳನ್ನಾಗಿಸಿ ದಾಳಿ ಮಾಡುವುದರ ಕುರಿತು ಬರೆದಿರುವ ಯೂನಿಸೆಫ್ ಸಂಸ್ಥೆಯು ಮಕ್ಕಳ ಮೇಲಿನ ಈ ಹಿಂಸಾತ್ಮಕ ಕ್ರೌರ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಈವರೆಗೂ ಇಸ್ರೇಲ್ ಸೇನೆಯು ಪ್ರಾಥಮಿಕ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳೂ ಸೇರಿದಂತೆ ಸುಮಾರು ಐನೂರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.

ಯೂನಿಸೆಫ್ ಸಂಸ್ಥೆಯ ಹಿಂದಿನ ಹೇಳಿಕೆಗಳ ಪ್ರಕಾರ ಇಸ್ರೇಲ್ ಸೇನೆಯು. "ನಿಗಧಿತ ಗುರಿ"ಗಳ ಹೆಸರಿನಲ್ಲಿ ಐನೂರಕ್ಕೂ ಹೆಚ್ಚು ಬಾರಿ ಶಾಲಾ-ಕಾಲೇಜುಗಳ ಮೇಲೆ ದಾಳಿ ಮಾಡಿದ್ದು, ಗಾಝಾ ಪಟ್ಟಿಯಲ್ಲಿನ ಎಲ್ಲಾ ಹನ್ನೆರಡು ವಿಶ್ವವಿದ್ಯಾನಿಲಯಗಳು ಈ ದಾಳಿಗೆ ಒಳಗಾಗಿವೆ ಎಂದು ತಿಳಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಇಸ್ರೇಲ್ ಸೇನೆಯು ಪೂರ್ವ ಗಾಝಾ ಪ್ರದೇಶದ ಅಲ್-ತಬೀನ್ ಎಂಬ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಸುಮಾರು ನೂರಕ್ಕೂ ಹೆಚ್ಚು ಜನರು ಮೃತ ಹೊಂದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

03 October 2024, 16:41