SAʴý

ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ತಾರ್ಸಿಯಸ್ ಇಸಾವೊ ಕಿಕುಚಿ ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ತಾರ್ಸಿಯಸ್ ಇಸಾವೊ ಕಿಕುಚಿ  

ಜನನ ಪ್ರಮಾಣ ಇಳಿಕೆ ಹಿನ್ನೆಲೆ, ಹಿರಿಯರನ್ನು ದೂರಾಗಿಸುವ ಕುರಿತು ಎಚ್ಚರಿಕೆ ನೀಡಿದ ಮಹಾಧರ್ಮಾಧ್ಯಕ್ಷ ತಾರ್ಸಿಯಸ್ ಇಸಾವೊ ಕಿಕುಚಿ

ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ತಾರ್ಸಿಯಸ್ ಇಸಾವೊ ಕಿಕುಚಿ ಅವರು ಯುವ ಸಮೂಹ ಹಾಗೂ ಹಿರಿಯರ ನಡುವೆ ಹೆಚ್ಚಿನ ಸಂವಾದಗಳಾಗಬೇಕು ಎಂದು ಹೇಳಿದ್ದಾರೆ. ಜಪಾನಿನಲ್ಲಿ ಜನನ ಪ್ರಮಾಣವು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿರುವ ಇವರು ಹಿರಿಯರನ್ನು ಎಂದಿಗೂ ನಾವು ಅಂಚಿಗೆ ಸರಿಸಬಾರದು. ಅವರನ್ನು ಎಂದಿಗೂ ನಮ್ಮ ಅವಿಭಾಜ್ಯ ಅಂಗ ಎಂಬಂತೆ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ವರದಿ: ಲಿಕಾಸ್ ನ್ಯೂಸ್

ತಲೆಮಾರುಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಕುರಿತು ಬಲಿಪೂಜೆಯ ಪ್ರಬೋಧನೆಯಲ್ಲಿ ಮಾತನಾಡಿದ ಮಹಾಧರ್ಮಾಧ್ಯಕ್ಷ ಇಸಾವೊ ಅವರು ಜಪಾನ್ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಜನನ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯರು ಹಾಗೂ ಯುವ ಜನತೆಯ ನಡುವೆ ಒಂದು ರೀತಿಯ ಅಂತರವೆಂಬುದು ಉದ್ಭವವಾಗುತ್ತಿದೆ. ಆದ ಕಾರಣ ಯುವ ಸಮೂಹವು ಎಂದಿಗೂ ಹಿರಿಯರನ್ನು ಹೊರೆ ಎಂಬಂತೆ ನೋಡಬಾರದು. ಬದಲಿಗೆ ಬದುಕಿನ ಅವಿಭಾಜ್ಯ ಅಂಗಗಳೆಂದು ಪರಿಗಣಿಸಬೇಕು ಎಂದು ಹೇಳಿದರು.

ತಮ್ಮ ಪ್ರಬೋಧನೆಯ ಸಾರಾಂಶವನ್ನು ಜನತೆಗೆ ಉತ್ತಮವಾಗಿ ಮನದಟ್ಟು ಮಾಡಿಸಲು ವಿಶ್ವ ಅಜ್ಜ-ಅಜ್ಜಿಯರು ಹಾಗೂ ಹಿರಿಯರ ದಿನದಂದು ಪೋಪ್ ಫ್ರಾನ್ಸಿಸ್ ಅವರು ನೀಡಿರುವ ಸಂದೇಶದ ಹಲವು ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಂಡರು. "ಹಿರಿಯ ತಲೆಮಾರು ಕಿರಿಯರ ಭವಿಷ್ಯವನ್ನು ಹಾಳುಮಾಡುತ್ತದೆ" ಎಂಬ ತಪ್ಪು ಪರಿಕಲ್ಪನೆಯನ್ನು ಮನಸ್ಸಿನಿಂದ ದೂರಾಗಿಸಬೇಕು ಎಂದು ಅವರು ಕರೆ ನೀಡಿದರು.

"ತನ್ನ ಮಕ್ಕಳು ಮುದುಕರಾಗಿ, ಅವರಿಗೆ ಮಾಡಲು ಬೇರೆನೂ ಕೆಲಸವಿಲ್ಲದೆ ಇದ್ದಾಗಲೂ ಸಹ ದೇವರು ಅವರನ್ನು ಕೈಬಿಡುವುದಿಲ್ಲ" ಎಂಬ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಮಹಾಧರ್ಮಾಧ್ಯಕ್ಷ ಇಸಾವೊ ಕಿಕುಚಿ ಅವರು ಪುನರುಚ್ಛರಿಸಿದರು.      

16 September 2024, 16:24