SAʴý

ಜಕಾರ್ತಾದಲ್ಲಿ 101 ಮಕ್ಕಳು ಹಾಡುವ ಮೂಲಕ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಲಿದ್ದಾರೆ

ಜಕಾರ್ತಾದಲ್ಲಿ 101 ಮಕ್ಕಳು ಹಾಡುವ ಮೂಲಕ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಜಕಾರ್ತಾದ ಸ್ವರ್ಗಸ್ವೀಕೃತ ಮಾತೆಯ ಪ್ರಧಾನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಈ ವೇಳೆ ಮಕ್ಕಳು ಅವರನ್ನು ತಮ್ಮ ಹಾಡಿನ ಮೂಲಕ ಸ್ವಾಗತಿಸಲಿದ್ದಾರೆ.

ವರದಿ: ಮಾರ್ಕ್ ಸಾಲುದೆಸ್, ಅಜಯ್ ಕುಮಾರ್

ಜಕಾರ್ತಾದಲ್ಲಿ 101 ಮಕ್ಕಳು ಹಾಡುವ ಮೂಲಕ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಜಕಾರ್ತಾದ ಸ್ವರ್ಗಸ್ವೀಕೃತ ಮಾತೆಯ ಪ್ರಧಾನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಈ ವೇಳೆ ಮಕ್ಕಳು ಅವರನ್ನು ತಮ್ಮ ಹಾಡಿನ ಮೂಲಕ ಸ್ವಾಗತಿಸಲಿದ್ದಾರೆ.

ಕಳೆದ ಒಂದು ತಿಂಗಳಿಂದ ಪೋಪ್ ಫ್ರಾನ್ಸಿಸ್ ಅವರ ಬರುವಿಕೆಗಾಗಿ ಕಾಯುತ್ತಿದ್ದ ಮಕ್ಕಳ ಕಾತರಕ್ಕೆ ತೆರೆ ಬಿದ್ದಿದ್ದು, ಅವರು ನಾಳೆ ಜಕಾರ್ತಾದ ಸ್ವರ್ಗಸ್ವೀಕೃತ ಮಾತೆಯ ಪ್ರಧಾನಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರ ಎದುರು ಹಾಡುತ್ತಾ, ಅವರನ್ನು ತಮ್ಮ ದೇಶ ಇಂಡೋನೇಶಿಯಾಕ್ಕೆ ಬರಮಾಡಿಕೊಳ್ಳಲಿದ್ದಾರೆ.

ತಮ್ಮ ಭೇಟಿಯ ಎರಡನೇ ದಿನ ಜಕಾರ್ತಾದಲ್ಲಿ ಪೋಪ್ ಫ್ರಾನ್ಸಿಸ್ ಅವರು ದೇಶದ ಧರ್ಮಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರೂ ಸೇರಿದಂತೆ ವಿವಿಧ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಕುರಿತು ಇಲ್ಲಿನ ಜನ ಹೆಚ್ಚಿನ ನೀರಿಕ್ಷೆಯನ್ನು ವ್ಯಕ್ತಪಡಿಸಿದ್ದು, ಅವರನ್ನು ನೇರವಾಗಿ ನೋಡಲು ಕಾತುರದಿಂದ ಇದ್ದೇವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಈ ಮಕ್ಕಳು ಜಕರ್ತಾದ ವಿವಿಧ ಕಥೋಲಿಕ ಕ್ರೈಸ್ತ ಶಾಲೆಗಳಲ್ಲಿ ಓದುತ್ತಿದ್ದಾರೆ.

02 September 2024, 19:17