SAʴý

135 ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಿದ ನಿಕರಾಗುವ ಸರ್ಕಾರ

ಇತ್ತೀಚಿಗಷ್ಟೇ ವಿಶ್ವಸಂಸ್ಥೆಯು ನಿಕರಾಗುವಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿ ನೀಡಿದ ಹಿನ್ನೆಲೆ, ನಿಕರಾಗುವ ಸರ್ಕಾರವು ತಾನು ಬಂಧಿಸಿದ್ದ 135 ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಿದೆ. ಮಾನವೀಯತೆಯ ಆಧಾರದ ಮೇಲೆ ಇವರನ್ನು ಬಿಡುಗಡೆ ಮಾಡಲಾಗಿದ್ದು, ಇವರನ್ನು ಗ್ವಾಟೆಮಾಲಾ ದೇಶಕ್ಕೆ ವರ್ಗಾಯಿಸಲಾಗಿತ್ತು.

ವರದಿ: ಒಸ್ಸರ್ವತೋರೆ ರೋಮಾನೋ ಪತ್ರಿಕೆ

ಇತ್ತೀಚಿಗಷ್ಟೇ ವಿಶ್ವಸಂಸ್ಥೆಯು ನಿಕರಾಗುವಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿ ನೀಡಿದ ಹಿನ್ನೆಲೆ, ನಿಕರಾಗುವ ಸರ್ಕಾರವು ತಾನು ಬಂಧಿಸಿದ್ದ 135 ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಿದೆ. ಮಾನವೀಯತೆಯ ಆಧಾರದ ಮೇಲೆ ಇವರನ್ನು ಬಿಡುಗಡೆ ಮಾಡಲಾಗಿದ್ದು, ಇವರನ್ನು ಗ್ವಾಟೆಮಾಲಾ ದೇಶಕ್ಕೆ ವರ್ಗಾಯಿಸಲಾಗಿತ್ತು.

ಮಾನವೀಯ ಕಾರಣಗಳನ್ನು ನೀಡಿ, ಬಂಧಿಯಾಗಿದ್ದ ರಾಜಕೀಯ ಕಾರ್ಯಕರ್ತರುಗಳನ್ನು ಬಿಡುಗಡೆ ಮಾಡಲು ಅಮೇರಿಕಾ ಆಡಳಿತವು ಮಧ್ಯವರ್ತಿ ಸಂಧಾನಕಾರನಾಗಿ ಕಾರ್ಯನಿರ್ವಹಿಸಿದೆ.

ಅಮೇರಿಕಾದ ಶ್ವೇತಭವನದ ಪ್ರಕಾರ ಈ ರಾಜಕೀಯ ಖೈದಿಗಳನ್ನು ಈಗಾಗಲೇ ಗ್ವಾಟೆಮಾಲಾಕ್ಕೆ ವರ್ಗಾಯಿಸಲಾಗಿದ್ದು, ಗ್ವಾಟೆಮಾಲ ಸರ್ಕಾರವು ಇವರನ್ನು "ಸಂತೋಷವಾಗಿ" ಬರಮಾಡಿಕೊಳ್ಳಲು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇವರು ಗ್ವಾಟೆಮಾಲಾದಲ್ಲಿ ಬಂದಿಳಿದ ತಕ್ಷಣ ಅವರನ್ನು ಅಲ್ಲಿನ ಅಧಿಕಾರಿಗಳು ಬರಮಾಡಿಕೊಂಡು, ವಲಸಿಗರ ನೆರವಿನ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. 

06 September 2024, 17:55