SAʴý

ಇರಾನ್ ಗಣಿಗಾರಿಕೆ ವಿಕೋಪದಲ್ಲಿ ಮಡಿದ ವ್ಯಕ್ತಿಗಳಿಗೆ ಸಂತಾಪ ಸೂಚಿಸಿದ ಪೋಪ್ ಫ್ರಾನ್ಸಿಸ್

ನೈರುತ್ಯ ಇರಾನ್ ಪ್ರದೇಶದ ಗಣಿಯೊಂದರಲ್ಲಿ ಉಂಟಾದ ಸ್ಪೋಟದ ಕಾರಣ ಹಲವಾರು ಕೆಲಸಗಾರರು ಮೃತರಾದ ಪರಿಣಾಮ, ಪೋಪ್ ಫ್ರಾನ್ಸಿಸ್ ಅವರು ಅವರ ನಿಧನಕ್ಕೆ ಸಂತಾಪವನ್ನು ತಿಳಿಸಿ, ಅವರ ಕುಟುಂಬಗಳಿಗಾಗಿ ಪ್ರಾರ್ಥಿಸುವಂತೆ ಭರವಸೆ ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರ ಸಹಿಯುಳ್ಳ ಟೆಲಿಗ್ರಾಂ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಇರಾನಿನ ಗಣಿ ಪ್ರದೇಶದಲ್ಲಿ ಉಂಟಾದ ಸ್ಪೋಟದ ಕಾರಣ ಹಲವಾರು ಕೆಲಸಗಾರರು ಮೃತರಾದ ಪರಿಣಾಮ, ಅವರ ನಿಧನಕ್ಕೆ ಸಂತಾಪವನ್ನು ತಿಳಿಸಿ, ಅವರ ಕುಟುಂಬಗಳಿಗಾಗಿ ಪ್ರಾರ್ಥಿಸುವಂತೆ ಭರವಸೆ ನೀಡಿದ್ದಾರೆ.

ಕಳೆದ ಶನಿವಾರ ನಡೆದ ಈ ಅಪಘಾತದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಇನ್ನೂ ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಪೋಪ್ ಫ್ರಾನ್ಸಿಸ್ ಅವರು ಈ ವಿಕೋಪದಿಂದ ನಲುಗಿರುವ ಎಲ್ಲರಿಗೂ ಸಾಂತ್ವನವನ್ನು ಹೇಳಿದ್ದಾರೆ ಮಾತ್ರವಲ್ಲದೆ ದೇವರ ಕೃಪಾಶೀರ್ವಾದಗಳು ಇವರ ಮೇಲೆ ಇಳಿದು ಬರಲಿ ಹಾಗೂ ಇವರಿಗೆ ಶಕ್ತಿಯನ್ನು ತುಂಬಲಿ ಎಂದು ಪ್ರಾರ್ಥಿಸಿದ್ದಾರೆ.

27 September 2024, 04:00