SAʴý

ಸ್ಮರಣೆಯ ದಿನ ಸಂತ ಮೋನಿಕಾ ಅವರಿಗೆ ಗೌರವ ಅರ್ಪಿಸಿದ ಪೋಪ್ ಫ್ರಾನ್ಸಿಸ್

ಇಂದು ಸಂತ ಮೋನಿಕಾ ಅವರ ಸ್ಮರಣೆಯ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಿಂದ ತೆರಳಿ ರೋಮ್ ನಗರದ ಸಂತ ಅಗಸ್ಟೀನರ ದೇವಾಲಯಕ್ಕೆ ಧಾವಿಸಿದರು. ಈ ದೇವಾಲಯದಲ್ಲಿ ಸಂತ ಅಗಸ್ಟಿನರ ತಾಯಿ ಸಂತ ಮೋನಿಕಾರ ಅವಶೇಷಗಳನ್ನು ಸಂರಕ್ಷಿಸಲಾಗಿದೆ. ಸಂತ ಮೋನಿಕಾ ಅವರಿಗೆ ಪೋಪ್ ಫ್ರಾನ್ಸಿಸ್ ಗೌರವನ್ನು ಸಲ್ಲಿಸಿದರು.

ವರದಿ: ವ್ಯಾಟಿಕನ್ ನ್ಯೂಸ್

ಧರ್ಮಸಭೆಗೆ ಮಹಾನ್ ಸಂತ ಅಗಸ್ಟೀನರನ್ನು ನೀಡಿದ ಸಂತ ಮೋನಿಕಾ ಅವರ ಸ್ಮರಣೆಯ ಪ್ರಯುಕ್ತ ಪೋಪ್ ಫ್ರಾನ್ಸಿಸ್ ರೋಮ್ ನಗರದ ಸಂತ ಅಗಸ್ಟೀನರ ದೇವಾಲಯಕ್ಕೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಸಂತ ಮೋನಿಕಾ ಅವರನ್ನು ಅನೇಕ ಶತಮಾನಗಳಿಂದ ಸಂತರೆಂದು ಗೌರವಿಸಿಕೊಂಡು ಬರಲಾಗಿದೆ. ಸಂತ ಅಗಸ್ಟೀನರಿಗಾಗಿ ಇವರು ದೇವರಲ್ಲಿ ಸದಾ ಎಡೆಬಿಡದೆ ಪ್ರಾರ್ಥಿಸಿದ್ದರು.

ವ್ಯಾಟಿಕನ್ ಮಾಧ್ಯಮ ಕಚೇರಿಯು "ಎಕ್ಸ್" ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಮಾಹಿತಿಯಂತೆ ಇಲ್ಲಿಗೆ ತಮ್ಮ ಭೇಟಿಯನ್ನು ನೀಡಿ ಹಿಂತಿರುಗುವಾಗ ಪೋಪ್ ಫ್ರಾನ್ಸಿಸ್ ಅವರು ಈ ದೇವಾಲಯದ ಉಸ್ತುವಾರಿಯನ್ನು ಹೊಂದಿರುವ ಸಂತ ಅಗಸ್ಟೀನರ ಸಭೆಯ ಗುರುಗಳನ್ನು, ಧಾರ್ಮಿಕ ಸಹೋದರ-ಸಹೋದರಿಯನ್ನು ಭೇಟಿ ಮಾಡಿದ್ದಾರೆ.   

27 August 2024, 18:27