SAʴý

ಅಫ್ಘಾನಿಸ್ಥಾನ: ದನಿಯೆತ್ತಲಾಗದವರ ಪರವಾಗಿ ದನಿಯೆತ್ತುವುದು

ಅಫ್ಗಾನಿಸ್ತಾನದಲ್ಲಿ ಆಡಳಿತವನ್ನು ನಡೆಸುತ್ತಿರುವ ತಾಲಿಬಾನ್ ಸರ್ಕಾರವು ಅಲ್ಲಿ ಹೊಸ ಕಾನೂನುಗಳನ್ನು ತಂದಿದ್ದು, ಇವುಗಳ ಪ್ರಕಾರ ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ ಹಾಗೂ ಹಾಡುವಂತಿಲ್ಲ. ಇದು ಮಹಿಳೆಯರ ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದು, ಈದಕ್ಕೆ ವ್ಯಾಪಕ ಖಂಡನೆ ಕೇಳಿ ಬರುತ್ತಿದೆ. ಅಫ್ಘಾನಿಸ್ಥಾನದಲ್ಲಿ ಅಮೇರಿಕಾ ಸೇನಾಪಡೆಗಳು ಮೂರು ವರ್ಷಗಳ ಹಿಂದೆ ಹಿಂತಿರುಗಿದ ನಂತರ ತಾಲಿಬಾನ್ ಇಲ್ಲಿನ ಆಡಳಿತವನ್ನು ವಹಿಸಿಕೊಂಡಿತ್ತು.

ವರದಿ: ಅಲೆಸ್ಸಾಂದ್ರೋ ಜಿಸೊತ್ತಿ

ಅತ್ಯಂತ ಬಾಲಿಶ ಅಥವಾ ಸ್ತ್ರೀವಿರೋಧಿ ಎಂದೇ ಹೇಳಲಾದ ಕಾನೂನುಗಳನ್ನು ಇಲ್ಲಿನ ತಾಲಿಬಾನ್ ಜಾರಿಗೊಳಿಸಿದ್ದು, ಇಲ್ಲಿ ಬಹುತೇಕ ಮಹಿಳೆಯರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ.

ವಿಶ್ವಸಂಸ್ಥೆಯ ಖಂಡನೆ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ಮೇಲೆ ಈಗಾಗಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿದೆ. ಇತ್ತೀಚೆಗೆ ಮಹಿಳೆಯರು ಮನೆಯಿಂದ ಆಚೆ ಸಾರ್ವಜನಿಕವಾಗಿ ಮುಖವನ್ನು ತೋರಿಸುವಂತಿಲ್ಲ ಹಾಗೂ ಮಾತನಾಡುವಂತಿಲ್ಲ ಎಂಬ ಕಾನೂನನ್ನು ವಿಧಿಸಿದೆ. ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು, ಇದು ಆಫ್ಘಾನ್ ಮಹಿಳೆಯ ಧ್ವನಿಯನ್ನು ಹತ್ತಿಕ್ಕುವ ನಿರ್ಧಾರ. ಕೂಡಲೇ ತಾಲಿಬಾನ್ ಈ ಕಾನೂನನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರು "ತಾಲಿಬಾನಿನ ಈ ನಡೆ ಅತ್ಯಂತ ಹೇಯ ಹಾಗೂ ಕಟುವಾಗಿದೆ. ಈಗಾಗಲೇ ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಬಹುತೇಕ ಕಸಿದುಕೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂತಹ ಕಾನೂನುಗಳು ಸಂಪೂರ್ಣವಾಗಿ ಮಹಿಳೆಯರನ್ನು ಸಮಾಜದಲ್ಲಿ ಇಲ್ಲವಾಗಿಸುತ್ತವೆ" ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಹೈಕಮಿಷನರ್ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ತಾಲಿಬಾನ್ ಅವರ ಮಾತುಗಳನ್ನು ತಳ್ಳಿಹಾಕಿದೆ. ಇದು ಮಹಿಳೆಯರನ್ನು ರಕ್ಷಿಸಲು ತಾಲಿಬಾನ್ ಮಾಡುತ್ತಿರುವ ಸೇವೆ ಎಂದು ತನ್ನ ನಡೆಯನ್ನು ತಾಲಿಬಾನ್ ಸಮರ್ಥಿಸಿಕೊಂಡಿದೆ. "ಇದು ಇಸ್ಲಾಮಿಕ್ ಷರಿಯಾ ಕುರಿತು ಮಾಹಿತಿ ಇಲ್ಲದವರು ನೀಡುವ ದುರಹಂಕಾರದ ಹೇಳಿಕೆ" ಎಂದು ತಾಲಿಬಾನ್ ವಿಶ್ವಸಂಸ್ಥೆಯನ್ನು ಟೀಕಿಸಿದೆ.

30 August 2024, 14:19