SAʴý

ಸಂತ ಪೇತ್ರರ ಕುರ್ಚಿಯ ಪವಿತ್ರ ಪ್ರತಿರೂಪವ ದಿಟ್ಟಿಸಿದ ಪೋಪ್ ಫ್ರಾನ್ಸಿಸ್

ಸಿನೋಡ್ ಅಧಿವೇಶನದ ಆರಂಭಿಕ ಬಲಿಪೂಜೆಯಲ್ಲಿ ಭಾಗವಹಿಸುವುದಕ್ಕೂ ಮುಂಚಿತವಾಗಿ ಸಂತ ಪೇತ್ರರ ಕುರ್ಚಿಯ ಪವಿತ್ರ ಪ್ರತಿರೂಪವನ್ನು ದಿಟ್ಟಿಸಿ ನೋಡಿದರು.

ವರದಿ: ವ್ಯಾಟಿಕನ್ ನ್ಯೂಸ್

ಸಿನೋಡ್ ಅಧಿವೇಶನದ ಆರಂಭಿಕ ಬಲಿಪೂಜೆಯಲ್ಲಿ ಭಾಗವಹಿಸುವುದಕ್ಕೂ ಮುಂಚಿತವಾಗಿ ಸಂತ ಪೇತ್ರರ ಕುರ್ಚಿಯ ಪವಿತ್ರ ಪ್ರತಿರೂಪವನ್ನು ದಿಟ್ಟಿಸಿ ನೋಡಿದರು. 

ವ್ಯಾಟಿಕನ್ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ "ಪೋಪ್ ಫ್ರಾನ್ಸಿಸ್ ಅವರನ್ನು ಸಂತ ಪೇತ್ರರ ಮಹಾದೇವಾಲಯದಲ್ಲಿರುವ ಸಂತ ಪೇತ್ರರ ಪಾರಂಪರಿಕ ಪ್ರೇಷಿತ ಕುರ್ಚಿ ಇರುವ ಒಟ್ಟೊಬಾನಿ ಸ್ಯಾಕ್ರಿಸ್ಟಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಂತ ಪೇತ್ರರ ಪ್ರೇಷಿತ ಅಧಿಕಾರದ ಚಿಹ್ನೆಯಾಗಿರುವ ಕುರ್ಚಿಯನ್ನು ದಿಟ್ಟಿಸಿ ನೋಡಿದರು. ಸಂತ ಪೇತ್ರರ ಉತ್ತರಾಧಿಕಾರಿಯಾಗಿರುವ ಅವರು ಮೊದಲ ವಿಶ್ವಗುರುವಿನ ಕುರ್ಚಿಯನ್ನು ಕಣ್ತುಂಬಿಕೊಂಡಿದ್ದು, ವಿಶೇಷವಾಗಿತ್ತು.

ಸಂತ ಪೇತ್ರರ ಕುರ್ಚಿಯನ್ನು ಹೋಗಿ ನೋಡಿದ ಮೊದಲ ವಿಶ್ವಗುರು ಪೋಪ್ ಫ್ರಾನ್ಸಿಸ್ ಆಗಿದ್ದಾರೆ ಎಂದು ಹೇಳಲಾಗಿದೆ. 

02 October 2024, 18:35