SAʴý

ಸಿನೋಡ್ ಸಾರ್ವತ್ರಿಕ ಅಧಿವೇಶನವನ್ನು ಬಲಿಪೂಜೆಯ ಮೂಲಕ ಉದ್ಘಾಟಿಸಿದ ಪೋಪ್ ಫ್ರಾನ್ಸಿಸ್

ಧರ್ಮಾಧ್ಯಕ್ಷರ ಸಿನೋಡ್ ಸಭೆಯ ಹದಿನಾರನೇ ಅಧಿವೇಶನವನ್ನು ಉದ್ಘಾಟಿಸಲು ಸಂತ ಪೇತ್ರರ ಚೌಕದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ಬಲಿಪೂಜೆಯ ಪ್ರಬೋಧನೆಯಲ್ಲಿ ಅವರು ಯಾವುದೇ ಸಂವಾದಕ್ಕೆ ನಮ್ಮ ಹೃದಯಗಳು ತೆರೆದಿರಬೇಕು ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಧರ್ಮಾಧ್ಯಕ್ಷರುಗಳ ಸಿನೋಡ್ ಸಭೆಯ ಹದಿನಾರನೇ ಅಧಿವೇಶನವನ್ನು ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ಬಲಿಪೂಜೆಯನ್ನು ಅರ್ಪಿಸುವುದರ ಮೂಲಕ ಉದ್ಘಾಟಿಸಿದರು. ಈ ಸಿನೋಡ್ ಅಧಿವೇಶನವು "ಧ್ವನಿ", "ಆಶ್ರಯ", ಹಾಗೂ "ಮಗು" ಎಂಬ ವಿಷಗಳ ಮೇಲೆ ಕೇಂದ್ರೀಕೃತವಾಗಿದ್ದು, ಈ ಹಿನ್ನೆಲೆಯಲ್ಲಿ ಚರ್ಚೆ ಹಾಗೂ ಸಂವಾದಗಳನ್ನು ಒಳಗೊಳ್ಳಲಿದೆ.

ಇಂದು ಪವಿತ್ರ ಸಂರಕ್ಷಕ ದೂತರ ಹಬ್ಬದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು "ದೇವರು ನಮಗಾಗಿ ಕಳುಹಿಸಲ್ಪಟ್ಟಿರುವ ದೇವದೂತರ ಧ್ವನಿಯನ್ನು ನಾವು ಆಲಿಸಬೇಕು" ಎಂದು ನುಡಿದರು.

ಮುಂದುವರೆದು ಮಾತನಾಡಿದ ಅವರು "ಪ್ರಭು ನಮ್ಮ ಕರಗಳಲ್ಲಿ ತಮ್ಮ ಮಹಾನ್ ಜನತೆಯ ಕನಸುಗಳು, ಭರವಸೆಗಳನ್ನು ಇಟ್ಟಿದ್ದಾರೆ. ಆ ಭರವಸೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಾಗೂ ಧರ್ಮಸಭೆಯಲ್ಲಿ ಪ್ರತಿಯೊಬ್ಬರ ಧ್ವನಿ ಕೇಳಿಸುವಂತಹ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾವು ಸಂವಾದವನ್ನು ನಡೆಸಬೇಕಿದೆ" ಎಂದು ಹೇಳಿದರು.

02 October 2024, 17:54