SAʴý

ಪೋಪ್ ಫ್ರಾನ್ಸಿಸ್: ಪ್ರಾರ್ಥನೆಯು ಪವಿತ್ರಾತ್ಮರು ನಮ್ಮ ಹೃದಯಗಳನ್ನು ಬದಲಾಯಿಸಲು ನೆರವಾಗುತ್ತದೆ

ಪೋಪ್ ಫ್ರಾನ್ಸಿಸ್ ಅವರು "ಯೇಸು ಕಲಿಸಿದಂತೆ: ಭರವಸೆಯ ಯಾತ್ರಿಕರ ಫ್ರಾರ್ಥನೆ" ಎಂಬ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಈ ಮುನ್ನುಡಿಯಲ್ಲಿ ಅವರು ಆಧ್ಯಾತ್ಮಿಕತೆ ಹಾಗೂ ಪ್ರಾರ್ಥನೆಯ ಕುರಿತು ಮಾತನಾಡಿದ್ದು, ಈ ಪುಸ್ತಕವನ್ನು ಅಕ್ಟೋಬರ್ 7 ರಂದು ಬಿಡುಗಡೆ ಮಾಡಲಾಗುತ್ತದೆ. ಈ ಪುಸ್ತಕವು ಪ್ರಾರ್ಥನೆಯ ಕುರಿತು ಪೋಪ್ ಫ್ರಾನ್ಸಿಸ್ ಅವರ ಬರಹಗಳ ಸಂಕಲನವಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ತಮ್ಮ ಮುನ್ನುಡಿಯ ಒಕ್ಕಣೆಯಲ್ಲಿ ಪೋಪ್ ಫ್ರಾನ್ಸಿಸರು "ನಾನು ಪ್ರಾರ್ಥಿಸುವುದನ್ನು ನನ್ನ ಅಜ್ಜಿಯಿಂದ ಕಲಿತೆ. ಅವರೇ ನನಗೆ ಪ್ರಾರ್ಥನೆಯನ್ನು ಕಲಿಸಿದ್ದು, ಅಧ್ಯಾತ್ಮಿಕತೆಯನ್ನು ನನ್ನೊಳಗೆ ಬಿತ್ತಿದ್ದು." ಎಂದು ಹೇಳಿದ್ದಾರೆ. ಅದಾದ ನಂತರ ಸೆಮಿನರಿಯಲ್ಲಿ ಹಾಗೂ ಯೇಸುಸಭೆಯಲ್ಲಿ ನನಗೆ ಸಿಕ್ಕಿದ ಆಧ್ಯಾತ್ಮಿಕ ನಿರ್ದೇಶಕರುಗಳು ನನಗೆ ಪ್ರಾರ್ಥನೆಯಲ್ಲಿ ಬೆಳೆಯುವಂತೆ ನೆರವಾದರು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಮುಂದುವರೆದು ಈ ಮುನ್ನುಡಿಯಲ್ಲಿ ಮಾತನಾಡಿರುವ ಅವರು ಹೇಗೆ ಅವರು ಪ್ರಾರ್ಥಿಸುತ್ತಾರೆ. ಯಾವ ಪ್ರಾರ್ಥನೆಗಳೆಂದರೆ ಅವರಿಗೆ ಇಷ್ಟ ಹಾಗೂ ಪ್ರಾರ್ಥಿಸುವುದೆಂದರೆ ಏನು? ಎಂಬ ಕುರಿತು ವಿಸ್ತಾರವಾಗಿ ಮಾತನಾಡಿದ್ದಾರೆ. ಯೇಸು ಕ್ರಿಸ್ತರು ಕಲಿಸಿಕೊಟ್ಟ "ಸ್ವರ್ಗದಲ್ಲಿರುವ ನಮ್ಮ ತಂದೆಯೇ" ಎಂಬ ಪ್ರಾರ್ಥನೆಯಲ್ಲಿ ಎಲ್ಲವೂ ಅಡಗಿದೆ. ಒಬ್ಬ ಶಿಷ್ಯನು ಗುರುವಲ್ಲಿ ಕೇಳಬಹುದಾದ ಎಲ್ಲವೂ ಅದರಲ್ಲಿದೆ ಎಂದು ಹೇಳಿದ್ದಾರೆ.

ಇನ್ನು ಮಾತೆ ಮರಿಯಮ್ಮನವರ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ನನಗೆ ಮತ್ತೊಂದು ಇಷ್ಟದ ಪ್ರಾರ್ಥನೆ ಎಂದರೆ ಜಪಸರ. ಅದನ್ನು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ಮಾತೆ ಮರಿಯಮ್ಮನವರು ಎಲ್ಲರನ್ನೂ ಕಾಪಾಡುವ ತಾಯಿಯಾಗಿದ್ದಾರೆ. ಅವರಲ್ಲಿ ನಾನು ನನ್ನ ಸಮಾಧಾನವನ್ನು ಕಂಡುಕೊಳ್ಲುತ್ತೇನೆ ಎಂದು ಹೇಳಿದ್ದಾರೆ.

03 October 2024, 18:01