SAʴý

ಬೆಲ್ಜಿಯನ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ ಧರ್ಮಸಭೆಯ ಲೈಂಗಿಕ ಹಗರಣಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಧರ್ಮಸಭೆಯ ಲೈಂಗಿಕ ಹಗರಣಗಳ ಕುರಿತು ಮಾತನಾಡಿದ್ದಾರೆ. ಈ ಲೈಂಗಿಕ ಹಗರಣಗಳು ಧರ್ಮಸಭೆಗೆ "ಕಳಂಕ" ವಾಗಿವೆ ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿದ್ದಾರೆ. ಮೊದಲ ದಿನದಲ್ಲಿ ಅವರು ಇಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ, ಶಾಂತಿ ಸ್ಥಾಪನೆ ಹಾಗೂ ಸೋದರತ್ವದ ಕುರಿತು ಮಾತನಾಡಿದ್ದಾರೆ.

ಮುಂದುವರೆದು ಪೋಪ್ ಫ್ರಾನ್ಸಿಸ್ ಅವರು ಧರ್ಮಸಭೆಯಿಂದ ಮಕ್ಕಳ ಮೇಲೆ ಆಗಿರು ಲೈಂಗಿಕ ಹಗರಣಗಳ ಕುರಿತು ಮಾತುಗಳನ್ನು ಆಡಿದ್ದಾರೆ. ಈ ಕುರಿತು ಧರ್ಮಸಭೆಯು ಕಳಂಕಯುಕ್ತವಾಗಿದೆ. ಈ ಅವಮಾನವನ್ನು ಧರ್ಮಸಭೆ ಅನುಭವಿಸಬೇಕು ಮಾತ್ರವಲ್ಲದೆ, ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಾವು ಮುಂದುವರೆಯಬೇಕು ಎಂದು ಹೇಳಿದರು.

ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಧರ್ಮಸಭೆಯು ಎಂದಿಗೂ ಕಾರಣಗಳನ್ನು ನೀಡಬಾರದು. ಮಕ್ಕಳ ಮೇಲಿನ ಲೈಂಗಿಕ ತಪ್ಪುಗಳನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಹಾಗೂ ಇಂತಹ ಸಮಸ್ಯೆಗಳನ್ನು ಬೇರು ಸಹಿತ ತೊಡೆದು ಹಾಕಲು ನಾವು ಅವಿರತ ಪ್ರಯತ್ನಗಳನ್ನು ನಾವು ಮಾಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಪದೇ ಪದೇ ಪುನರುಚ್ಛರಿಸಿದರು.  

27 September 2024, 15:46