SAʴý

2024 ರ "ವರ್ಡ್ ಕಾನ್ಫರೆನ್ಸ್"ನಲ್ಲಿ ಪ್ರಾರ್ಥನೆಯ ಶಕ್ತಿಯ ಮೇಲೆ ಬೆಳಕು ಚೆಲ್ಲಲಿರುವ ಕ್ಲರೇಷಿಯನ್ನರು

ಕ್ಲರೇಷಿಯನ್ ಧಾರ್ಮಿಕ ಸಭೆಯವರು ಪ್ರತಿ ವರ್ಷ "ವರ್ಡ್ (ದೇವರ ವಾಕ್ಯ) ಕಾನ್ಫರೆನ್ಸ್ ಅನ್ನು ಹಮ್ಮಿಕೊಳ್ಳುತ್ತಾರೆ. ಈ ವರ್ಷದ ಈ ಕಾನ್ಫರೆನ್ಸಿನ ಶೀರ್ಷಿಕೆಯನ್ನಾಗಿ ಪ್ರಾರ್ಥನೆಯನ್ನು ಆರಿಸಿಕೊಂಡಿದ್ದಾರೆ. ಏಕೆಂದರೆ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷಕ್ಕೂ ಮುಂಚಿತವಾಗಿ 2024 ನೇ ವರ್ಷವನ್ನು ಪ್ರಾರ್ಥನೆಯ ವರ್ಷ ಎಂದು ಘೋಷಿಸಿದ್ದಾರೆ.

ವರದಿ: ಲಿಕಾಸ್ ನ್ಯೂಸ್

"ಪ್ರಭೂ ನಮಗೆ ಪ್ರಾರ್ಥಿಸುವುದನ್ನು ಕಲಿಸಿಕೊಡಿ" ಎಂಬುದು ಈ ಕಾನ್ಫರೆನ್ಸಿನ ಶೀರ್ಷಿಕೆಯಾಗಿದೆ. ಈ ಸಮಾವೇಶವು ನವೆಂಬರ್ 30, 2024 ರಂದು ಕ್ವೇಝಾನ್ ಸಿಟಿಯಲ್ಲಿ ನಡೆಸಲಾಗುತ್ತದೆ. 

2025 ನೇ ವರ್ಷವು ವಿಶ್ವ ಧರ್ಮಸಭೆಯ ಜ್ಯೂಬಿಲಿ ವರ್ಷವಾಗಿರುವ ಕಾರಣ ಇದಕ್ಕೆ ಸಿದ್ಧತೆಗಳನ್ನು ಮೂರು ವರ್ಷಗಳಿಗೆ ಮುಂಚಿತವಾಗಿ ಆರಂಭಿಸಲಾಗಿದ್ದು, ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷಕ್ಕೂ ಮುಂಚಿತವಾಗಿ 2024 ನೇ ವರ್ಷವನ್ನು ಪ್ರಾರ್ಥನೆಯ ವರ್ಷ ಎಂದು ಘೋಷಿಸಿದ್ದಾರೆ. ಸಮಸ್ತ ಕ್ರೈಸ್ತರೂ ಜ್ಯೂಬಿಲಿ ವರ್ಷವನ್ನು ಅತ್ಯಂತ ಸಂಭ್ರಮ ಸಡಗರದಿಂದ, ಆಧ್ಯಾತ್ಮಿಕ ಸಿದ್ಧತೆಯಿಂದ ಆಚರಿಸಲು ಪೋಪ್ ಫ್ರಾನ್ಸಿಸ್ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.   

04 October 2024, 15:59